‘ಬುಲೆಟ್ ರಾಣಿ ಚಿತ್ರಕ್ಕೆ ಮಾತಿನ ಜೋಡಣೆ ಮುಕ್ತಾಯ
Posted date: 30 Thu, Apr 2015 – 09:19:51 AM

ಫ಼ೋಕಸ್ ಆನ್ ಪಿಕ್ಚರ್ಸ್ ಲಾಂಛನದಲ್ಲಿ ಸಲ್ಲಾವುದ್ದೀನ್ ಯುಸಫ಼ ಅವರು ನಿರ್ಮಿಸುತ್ತಿರುವ ‘ಬುಲೆಟ್ ರಾಣಿ ಚಿತ್ರಕ್ಕೆ ರಾಜೇಶ್‌ರಾಮನಾಥ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಮುಕ್ತಾಯವಾಗಿದೆ.
ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಸಾಜೀದ್ ಇಕ್ಬಾಲ್ ಕುರೇಶಿ ಅವರು ನಿರ್ದೇಶಿಸುತ್ತಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಗುಣವಂತ್ ಸಂಗೀತ ನೀಡುತ್ತಿದ್ದಾರೆ. ಸೆಲ್ವಂ ಛಾಯಾಗ್ರಹಣ, ಸುರೇಶ್ ಸಂಕಲನ, ವೇಣುಪಾಲ್ ನೃತ್ಯ ನಿರ್ದೇಶನ, ಮಾಸ್‌ಮಾದ ಸಾಹಸ ನಿರ್ದೇಶನ ಹಾಗೂ ನಾಗು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ನಾಗೇಶ್ವರರಾವ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಪ್ರಿಯಾಂಕ(ನಿಶಾ) ಕೊಠಾರಿ, ಆಶೀಷ್ ವಿದ್ಯಾರ್ಥಿ, ರವಿಕಾಳೆ, ಅಮಿತ್, ಶಫ಼ಿ, ರಮೇಶ್, ಪ್ರತಾಪ್, ರಾಜೇಶ್, ವಿವೇಕ್, ಉದಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed